ಸಮರ್ಥ ಕ್ರಿಯೇಷನ್ಸ್ ಲಾಂಛನದಲ್ಲಿ ಗೋಪಿ ಶಾಸ್ತ್ರಿ ನಿರ್ಮಿಸಿರುವ ಯಾರೆ ನೀ ಮೋಹಿನಿಯ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರ ಲವ್ ಮತ್ತು ಹಾರರ್ ಕಥಾವಸ್ತುವುಳ್ಳ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ಹಾಗೂ ಸಂಗೀತ - ಗೋಪಿ, ಛಾಯಾಗ್ರಹಣ - ನಾರಾಯಣ್, ಸಂಕಲನ - ರಾಜಶೇಖರ ರೆಡ್ಡಿ, ನಿರ್ದೇಶನ - ಗಣೇಶ್ - ಗೋಪಿ, ತಾರಾಗಣದಲ್ಲಿ ಶಂಕರ್ ಅಶ್ವಥ್, ಆಕಾಶ್, ಶಾಂತಲಾ, ಸ್ಕಂದ ಶಂಕರ್ ಅಶ್ವಥ್ (ಶಂಕರ್ ಅಶ್ವಥ್ ರವರ ಪುತ್ರ) ಉಲ್ಲಾಸಿನಿ, ಆಶಾ ಮುಂತಾದವರು ಅಭಿನಯಿಸಿದ್ದಾರೆ.